ಮುಖ್ಯ ವಿಷಯಕ್ಕೆ ತೆರಳಿ
Junubisahaara
ರಾಷ್ಟ್ರೀಯ

ಓಸಾಕ ತ್ಯಾಜ್ಯ ದಹನ ಘಟಕಕ್ಕೆ ಮುಖ್ಯಮಂತ್ರಿ ನೇತೃತ್ವದ ನಿಯೋಗ ಭೇಟಿ; ತ್ಯಾಜ್ಯದಿಂದ ವಿದ್ಯುತ್ ಮಾದರಿ ಕುರಿತಂತೆ ಅಧ್ಯಯನ

1 ನಿಮಿಷ ಓದು
PB-SHABD

ತ್ಯಾಜ್ಯದಿಂದ ಇಂಧನ ತಂತ್ರಜ್ಞಾನ ಕುರಿತಂತೆ ಅಧ್ಯಯನ ನಡೆಸಲು ಮತ್ತು ನಗರ ತ್ಯಾಜ್ಯ ನಿರ್ವಹಣೆಗೆ ಸುಸ್ಥಿರ ಪರಿಹಾರಗಳನ್ನು ಅನ್ವೇಷಿಸಲು ಸರ್ಕಾರದ ಪ್ರಯತ್ನಗಳ ಭಾಗವಾಗಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯದ ನಿಯೋಗದೊಂದಿಗೆ ಜಪಾನ್‌ನ ಒಸಾಕಾದಲ್ಲಿರುವ ಮೈಶಿಮಾ ದಹನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, ನಮ್ಮ ನಗರ ತ್ಯಾಜ್ಯ ನಿರ್ವಹಣಾ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಹುಡುಕುವುದು. ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಜಾಗತಿಕ ವಿನೂತನ ಪದ್ಧತಿಗಳ ಬಗ್ಗೆ ಅಧ್ಯಯನ ಮಾಡುವುದು ಈ ಭೇಟಿಯ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.

ರಾಜ್ಯದ ನಿಯೋಗ, ಮೈಶಿಮಾ ತ್ಯಾಜ್ಯ ದಹನ ಘಟಕದಲ್ಲಿ ದಿನಕ್ಕೆ ೯೦೦ ಟನ್ ಪುರಸಭೆ ತ್ಯಾಜ್ಯವನ್ನು ವಿದ್ಯುತ್ ಆಗಿ ಪರಿವರ್ತಿಸುವ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿತು. ಈ ಘಟಕವು, ತನ್ನ ವಿದ್ಯುತ್ ಅಗತ್ಯತೆಯನ್ನ ಪೂರೈಸಿಕೊಂಡು, ಉಳಿದ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ.

"ನಗರ ಯೋಜನೆ, ಮೂಲಸೌಕರ್ಯ ಮತ್ತು ಪರಿಸರ ನಿರ್ವಹಣೆಯಲ್ಲಿ ಜಾಗತಿಕ ಮನ್ನಣೆ ಪಡೆದ ಇಂಥ ಮಾದರಿಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳುವುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳು

ಎಲ್ಲಾ ನೋಡಿ