ಮುಖ್ಯ ವಿಷಯಕ್ಕೆ ತೆರಳಿ
Junubisahaara

ಸಚಿವ ಕಿರಣ್ ರಿಜಿಜು ಸೌದಿಅರೆಬಿಯಾ ಪ್ರವಾಸ ಅಂತ್ಯ - ಪ್ರವಾಸ ಅತ್ಯಂತ ಫಲಪ್ರದ ಮತ್ತು ಅರ್ಥಪೂರ್ಣ

1 ನಿಮಿಷ ಓದು

ಸೌದಿಅರೆಬಿಯಾ ಪ್ರವಾಸ ಅತ್ಯಂತ ಫಲಪ್ರದ ಮತ್ತು ಅರ್ಥಪೂರ್ಣವಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಈ ಭೇಟಿ ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರದ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

ಸೌದಿಅರೆಬಿಯಾ ನಾಯಕತ್ವ ಮತ್ತು ಅಲ್ಲಿನ ಜನರು ತಮಗೆ ನೀಡಿದ ಆತ್ಮೀಯ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ ಅವರು, ಹಜ್ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಡುವ ವಿಚಾರದಲ್ಲಿ ಭಾರತ ಮತ್ತು ಸೌದಿಅರೆಬಿಯಾ ಎರಡೂ ದೇಶಗಳು ಬಲವಾದ ಬದ್ಧತೆ ಹೊಂದಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸೌದಿಅರೆಬಿಯಾ ಪ್ರವಾಸದ ವೇಳೆ ಅಲ್ಲಿನ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಬಿನ್ ಫಜನ್ ಅಲ್ ರಬಿಯಾ ಅವರೊಂದಿಗೆ 2027ನೇ ಸಾಲಿನ ಹಜ್ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಈ ಒಪ್ಪಂದದ ಅನ್ವಯ ಭಾರತಕ್ಕೆ 1 ಲಕ್ಷ 75 ಸಾವಿರದ 25 ಹಜ್ ಯಾತ್ರಾರ್ಥಿಗಳ ಕೋಟಾ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಜ್ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಭಾರತೀಯ ಯಾತ್ರಾರ್ಥಿಗಳಿಗೆ ಸುರಕ್ಷಿತ, ಸುಗಮ ಮತ್ತು ಸಂಘಟಿತ ಯಾತ್ರೆಯನ್ನು ಖಚಿತಪಡಿಸಲು ಅಗತ್ಯವಿರುವ ಎಲ್ಲ ನೆರವು ಒದಗಿಸುವ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು